ದಾವಣಗೆರೆ ಸೀಲ್‍ಡೌನ್ ಪ್ರದೇಶದಲ್ಲಿರುವ ನಾಗರೀಕರಿಗೆ ಅಗತ್ಯ ವಸ್ತುಗಳ ವ್ಯವಸ್ಥೆ ಮಾಡುವಲ್ಲಿ ದಾವಣಗೆರೆ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿ ಅಲ್ಲಿನ ನಾಗರೀಕರು ಪ್ರತಿಭಟನೆ ನಡೆಸಿದ್ದಾರೆ.
ಸೀಲ್‍ಡೌನ್ ಪ್ರದೇಶದಲ್ಲಿ ಅಗತ್ಯ ವಸ್ತುಗಳಿಗೆ ಜನರ ಪರದಾಡುತ್ತಿದ್ದಾರೆ. ಇಲ್ಲಿನ ಎಸ್‍ಪಿಎಸ್ ನಗರದ 2ನೇ ಹಂತದಲ್ಲಿ ಕಳೆದ 4 ದಿನದಿಂದ ಹಾಲು, ತರಕಾರಿ, ಆಹಾರ ಸಾಮಾಗ್ರಿಗಳು ದೊರೆಯುತ್ತಿಲ್ಲ. ಹೊರಗಡೆ ಸಂಚರಿಸಲೂ ಬಿಡುತ್ತಿಲ್ಲ. ಅಗತ್ಯ ವಸ್ತುಗಳಿಲ್ಲದೇ ವಯೋವೃದ್ದರು ಹಾಗೂ ಮಕ್ಕಳು ಪರದಾಡುತ್ತಿದ್ದಾರೆ. ಮಕ್ಕಳಿಗೆ ಕುಡಿಯಲು ಹಾಲು ಸಿಗದ ಪರಿಸ್ಥಿತಿ ಈ ಭಾಗದಲ್ಲಿದೆ ನಮಗೆ ಅಗತ್ಯ ವಸ್ತುಗಳನ್ನು ನೀಡಿ ಇಲ್ಲವಾದರೆ ಲಾಕ್‍ಡೌನ್ ತೆರವು ಮಾಡಿ ದುಡಿಯಲು ಹೊರಗೆ ಬಿಡಬೇಕೆಂದು ತಮ್ಮ ಅಸಹಾಯಕತೆ ತೊಡಿಕೊಂಡಿದ್ದಾರೆ.